
ಹೊನ್ನಾವರ: ಎಸ್ಡಿಎಂ ಕಾಲೇಜಿನ ಸಭಾಂಗಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 111ನೇ ಮನ್ ಕಿ ಬಾತ್ ಕಾರ್ಯಕ್ರಮವನ್ನು ಟಿವಿ ಸ್ಕ್ರೀನ್ ಮೇಲೆ ಪ್ರದರ್ಶಿಸಲಾಯಿತು.
ಜಾನಪದ ಕಲಾವಿದೆ ಕುಟ್ಣಿ ಗೌಡ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮನ್ ಕಿ ಬಾತ್ ರಾಜ್ಯ ಸಂಯೋಜಕ ಪ್ರಸನ್ನ ನಾಯ್ಕ ಮಾತನಾಡಿ `ಈ ಕಾರ್ಯಕ್ರಮ ದೇಶದ ಜನರನ್ನು ತಲುಪುವ ಸ್ಪೂರ್ತಿದಾಯಕ ಸಂಗತಿಯಾಗಿದೆ\’ ಎಂದರು. ಶಾಸಕ ದಿನಕರ ಶೆಟ್ಟಿ, ಹಲವು ಬಿಜೆಪಿ ಪ್ರಮುಖರು ಇದ್ದರು.