
ಅಂಕೋಲಾ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗೃಹ ವಿಜ್ಞಾನ ಸಹಾಯಕ ಪ್ರಾಧ್ಯಾಪಕರಾಗಿರುವ ವಿಜಯಾ ಉಜ್ಜನಗೌಡ ಪಾಟೀಲ ಅವರು ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಪಿ ಎಚ್ ಡಿ ಪದವಿ ನೀಡಿದೆ.
`ದಿ ರಿಲೇಶನ್ಷಿಪ್ ಬಿಟ್ವೀನ್ ಮೊಬೈಲ್ ಫೋನ್ ಎಡಿಕ್ಷನ್, ಮೆಂಟಲ್ ಹೆಲ್ತ್ ಪ್ರೊಬ್ಲೆಮ್ಸ ಆಂಡ್ ಕೊಪಿಂಗ್ ಸ್ಕಿಲ್ಸ್ ಅಮಂಗ್ ಕಾಲೇಜ್ ಸ್ಟುಡೆಂಟ್ಸ್\’ ಎಂಬ ಸಂಶೋಧನಾ ಪ್ರಬಂಧವನ್ನು ಅವರು ರಚಿಸಿದ್ದರು. ಮೈಸೂರು ವಿಶ್ವವಿದ್ಯಾಲಯದ ಮಾನವ ಅಭಿವೃದ್ಧಿ ಪ್ರಾಧ್ಯಾಪಕರಾದ ಡಾ ಕೋಮಲಾ ಎಂ ಇವರಿಗೆ ಮಾರ್ಗದರ್ಶನ ನೀಡಿದ್ದರು.