
ಜೊಯಿಡಾದಲ್ಲಿ ನಡೆಯುತ್ತಿದ್ದ ಜನಸ್ಪಂದನಾ ಕಾರ್ಯಕ್ರಮಕ್ಕೆ ಪತ್ರಕರ್ತರು ತೆರಳುತ್ತಿದ್ದಾಗ ಕಾಡು ಪ್ರಾಣಿ ಹತ್ಯೆಗೆ ಇರಿಸಿದ ಬಾಂಬ್ ಸ್ಪೋಟಗೊಂಡಿದೆ. ಗುಂದದ ಮೂವರು ಪತ್ರಕರ್ತರು ಕಾರಿನಲ್ಲಿ ಜೊಯಿಡಾಗೆ ತೆರಳುತ್ತಿದ್ದರು. ರಸ್ತೆ ಅಂಚಿನಲ್ಲಿ ಸ್ಪೋಟಕ ಬಿದ್ದಿದ್ದು, ಕಾರಿನ ಟೈಯರ್ ಅದರ ಮೇಲೆ ಹತ್ತಿದ ತಕ್ಷಣ ಸ್ಪೋಟಗೊಂಡಿದೆ. ಕಾರಿನಲ್ಲಿ ಸಂಚರಿಸುತ್ತಿದ್ದವರಿಗೆ ಯಾವುದೇ ಅಪಾಯ ಆಗಿಲ್ಲ. ಸ್ಪೋಟಗೊಂಡಿದ್ದು ನಾಡ ಬಾಂಬ್ ಎಂದು ತಿಳಿದು ಬಂದಿದೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಸ್ಥಳೀಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.