
ಕಾರವಾರ: ಕದ್ರಾ ಬಳಿಯ ರಾಜೀವನಗರದ ಹನುಮಂತ ಮೋಹನ ಠಾಕೂರ (32 ) ಎಂಬಾತ 2017ರಲ್ಲಿ ತನ್ನ ಕುಟುಂಬದೊoದಿಗೆ ಕೂಲಿ ಕೆಲಸಕ್ಕಾಗಿ ಚನೈಗೆ ಹೋಗಿದ್ದು, ಈವರೆಗೂ ಪತ್ತೆಯಾಗಿಲ್ಲ.
ಈತ ಪತ್ನಿ ಲಕ್ಷಿ ಹಾಗೂ ಸಾಯಿನಾಥ, ಕುಮಾರ ಎಂಬ ಇಬ್ಬರು ಮಕ್ಕಳೊಂದಿಗೆ ತಮಿಳುನಾಡಿಗೆ ಹೋಗಿದ್ದ. ಅಲ್ಲಿಂದ ಮುಂದೆ ಚನೈ ತಲುಪಿದ್ದ. ಆದರೆ, ಮುಂದೆ ಆತನ ಬಗ್ಗೆ ಯಾರಿಗೂ ಗೊತ್ತಾಗಿಲ್ಲ. ಅಂದಿನಿoದ ಇಂದಿನವರೆಗೂ ಪೊಲೀಸರು ಆತನ ಜೊತೆ ಕುಟುಂಬದವರನ್ನು ಹುಡುಕುತ್ತಿದ್ದು, ಯಾರಾದರೂ ಮಾಹಿತಿ ಇದ್ದಲ್ಲಿ ಕದ್ರಾ ಪೊಲೀಸ್ ಠಾಣೆಯ ಸಿಪಿಐ (9480805231) ಅವರನ್ನು ಸಂಪಕಿಸುವoತೆ ಪೊಲೀಸರು ಕೇಳಿಕೊಂಡಿದ್ದಾರೆ.