
ಸೊರಬ: `ಹಳ್ಳಿ ಹಳ್ಳಿಗೂ ವೇಗದ ಇಂಟರ್\’ನೆಟ್ ಕೊಡಬೇಕು\’ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದ್ದು, ಇದನ್ನು ಕೆಲವರು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ\’ ಎಂದು ಸೊರಬದ ಕುಂಟಗಳಲೆ ನಾಗರಾಜ ಭಟ್ಟ ಹೇಳಿದ್ದಾರೆ.
`ಬಿ ಎಸ್ ಎನ್ ಎಲ್ ಕಚೇರಿಗೆ ಮೋಸ: ಪ್ರಶ್ನಿಸಿದವನಿಗೆ ಕಪಾಳ ಮೋಕ್ಷ\’ ಎಂದು ಪ್ರಕಟವಾಗಿದ್ದ ವರದಿಗೆ ಸಂಬoಧಿಸಿ ಅವರು ಪ್ರತಿಕ್ರಿಯೆ ನೀಡಿದ್ದು, `FTTH ಮೂಲಕ ಇಂಟರ್ನೆಟ್ ಸೇವೆ ಪಡೆದವರು ಪ್ರತಿ ತಿಂಗಳು ಪಾವತಿಸುವ ಹಣದಲ್ಲಿ ಪ್ರಾಂಚೈಸಿಯವರಿಗೆ ಕಮೀಶನ್ ಸಿಗುತ್ತದೆ. ಇದನ್ನು ಹೊರತುಪಡಿಸಿ ಅವರು ಎಲ್ಲಿಯೂ ಗ್ರಾಹಕರಿಂದ ಹಣ ಪಡೆಯುವ ಹಾಗಿಲ್ಲ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ನಾನು ಬಿ ಎಸ್ ಎನ್ ಎಲ್\’ನಿಂದ ದಾಖಲೆ ಪಡೆದಿದ್ದು, ಅನಧಿಕೃತ ಹಣ ವಸೂಲಿ ಮಾಡುತ್ತಿದ್ದ ಸುಹಾಸ್ ಹೆಗಡೆ ಎಂಬಾತರನ್ನು ಪ್ರಶ್ನಿಸಿದ್ದೆ. ನಾನು ಯಾರ ಮೇಲೆಯೂ ಹಲ್ಲೆ ಮಾಡಿಲ್ಲ. ಅನಗತ್ಯವಾಗಿ ನನ್ನ ವಿರುದ್ಧ ಸುಳ್ಳು ದೂರು ದಾಖಲಾಗಿದೆ. ತನಿಖೆಯಿಂದ ಎಲ್ಲಾ ಸತ್ಯ ಹೊರಬರಲಿದೆ\’ ಎಂದವರು ಪ್ರತಿಕ್ರಿಯಿಸಿದ್ದಾರೆ.

`ಇಂಟರ್ ನೆಟ್ ಸೇವೆ ಒದಗಿಸುವ ವಿಷಯವಾಗಿ ಅನಧಿಕೃತವಾಗಿ ಶುಲ್ಕ ವಸೂಲಿ ನಡೆಯುತ್ತಿರುವ ಬಗ್ಗೆ ಕೇಂದ್ರ ಸಚಿವಾಲಯ, ಪ್ರಧಾನಮಂತ್ರಿ ಕಚೇರಿಗೆ ದೂರು ಸಲ್ಲಿಸಲಾಗಿದೆ. ಸಾರ್ವಜನಿಕರು ಸೇವೆ ಪಡೆಯುವ ಮುನ್ನ ಅದಕ್ಕೆ ಸರ್ಕಾರ ನಿಗಧಿಪಡಿಸಿದ ಶುಲ್ಕದ ಬಗ್ಗೆ ಸರಿಯಾಗಿ ತಿಳಿದುಕೊಂಡಲ್ಲಿ ಮೋಸ ಹೋಗುವುದು ತಪ್ಪುತ್ತದೆ\’ ಎಂದವರು ಅಭಿಪ್ರಾಯಪಟ್ಟಿದ್ದಾರೆ.