
ಸುಮಂಗಲಾ ಆಚಾರಿ ಅವರ ಮನೆಗೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು
ನರ್ಸರಿಗಳಲ್ಲಿ ಪ್ಲಾಸ್ಟಿಕ್ ಬದಲು ಬಟ್ಟೆ ಕೈ ಚೀಲ ಬಳಸುವ ಬಗ್ಗೆ ಅರಣ್ಯ ಇಲಾಖೆ ಚಿಂತನೆ ನಡೆಸಿದೆ.
ಎಲ್ಲವೂ ಅಂದುಕೊoಡoತೆ ನಡೆದರೆ, ಅರಣ್ಯ ನರ್ಸರಿಗಳಲ್ಲಿ ಪ್ಲಾಸ್ಟಿಕ್ ಬದಲು ಬಟ್ಟೆಯ ಕೈ ಚೀಲಗಳಲ್ಲಿ ಗಿಡಗಳನ್ನು ಬೆಳೆಸಲಾಗುತ್ತದೆ. ಬುಧವಾರ ಬೆಳಗ್ಗೆ `ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಮಹಿಳೆಯ ಪಣ\’ ಎಂಬ ವಿಷಯದ ಕುರಿತು `S News\’ Digitel ವಿಶೇಷ ವರದಿ ಪ್ರಸಾರ ಮಾಡಿತ್ತು. ಸುಮಂಗಲಾ ಆಚಾರಿ ಅವರು ಅರಣ್ಯ ಇಲಾಖೆ ನರ್ಸರಿಗಳಲ್ಲಿ ಪ್ಲಾಸ್ಟಿಕ್ ಬದಲು ಬಟ್ಟೆಯ ಚೀಲ ಬಳಸುವ ಬಗ್ಗೆ ಅಭಿಪ್ರಾಯ ಹಂಚಿಕೊoಡಿದ್ದರು.
ಈ ಬೆನ್ನಲ್ಲೆ ಸಾಧಕ ಮಹಿಳೆಯನ್ನು ಭೇಟಿ ಮಾಡಿದ ಅರಣ್ಯಾಧಿಕಾರಿಗಳು ಅವರು ತಯಾರಿಸಿದ ಬಟ್ಟೆಯ ಚೀಲಗಳನ್ನು ಪರಿಶೀಲಿಸಿದ್ದಾರೆ. ಬಟ್ಟೆಯ ಕೈ ಚೀಲದ ಮಾದರಿಗಳನ್ನು ಅವರು ಪಡೆದಿದ್ದಾರೆ. `ಗಿಡಗಳ ಆರೈಕೆಗೆ ಒಂದು ವರ್ಷಗಳ ಕಾಲ ಬಾಳಿಕೆ ಬರುವ ಚೀಲಗಳ ಅಗತ್ಯವಿದ್ದು, ಗುಣಮಟ್ಟ ಪರಿಶೀಲನೆ ನಂತರ ಈ ಬಗ್ಗೆ ನಿರ್ಣಯಕೈಗೊಳ್ಳಲಾಗುತ್ತದೆ\’ ಎಂದು ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ತಿಳಿಸಿದರು. ಸುಮಂಗಲಾ ಆಚಾರಿ ಅವರ ಮನೆಗೆ ಭೇಟಿ ನೀಡಿದ ಅಧಿಕಾರಿಗಳು ಯಾಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಬಟ್ಟೆಯ ಕೈ ಚೀಲ ಸರಬರಾಜು ಮಾಡುವ ವಿಚಾರವನ್ನು ಮಾತನಾಡಿದ್ದಾರೆ. ಸದಾ ಮಾನವೀಯ ಸೇವೆಗಳಿಂದ ಗುರುತಿಸಿಕೊಂಡಿರುವ ಕೆನರಾ ಸರ್ಕಲ್\’ನ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಅವರು ಈ ಹಿಂದೆ ಹೊನ್ನಾವರದಲ್ಲಿದ್ದಾಗ ಅಲ್ಲಿ ಪರಿಸರ ಪೂರಕ ಪ್ರವಾಸೋದ್ಯಮಕ್ಕೆ ಒತ್ತು ನೀಡಿದ್ದರು.