
ಹೊನ್ನಾವರ: ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರವೀಣ ಕುಮಾರ್ ನಾಯಕ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಲಂಚ ಸ್ವೀಕರಿಸಿದ ಆರೋಪದ ಅಡಿ ಅವರನ್ನು ಬಂಧಿಸಲಾಗಿದೆ.
ಚoದ್ರಹಾಸ ಎಂಬಾತರ ಜಮೀನಿಗೆ ಸಂಬoಧಿಸಿ ಖಾತಾ ಬದಲಾವಣೆಗೆ 1 ಲಕ್ಷ ರೂಪಾಯಿಗೆ ಪ್ರವೀಣ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಚಂದ್ರಹಾಸ್ ಲೋಕಾಯುಕ್ತರಿಗೆ ದೂರಿದ್ದು, ಅದರ ಪ್ರಕಾರ 60 ಸಾವಿರ ರೂ ಹಣ ಸ್ವೀಕರಿಸುವಾಗ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಈ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಸಹ ಸಾಕಷ್ಟು ಜನ ಈ ಅಧಿಕಾರಿ ವಿರುದ್ಧ ದೂರಿದ್ದರು. ಉಸ್ತುವಾರಿ ಸಚಿವರು ಸಹ ಆಗ ಪ ಪಂ ಮುಖ್ಯಾಧಿಕಾರಿ ವಿರುದ್ಧ ಕಿಡಿಕಾರಿದ್ದರು.