ದಾಂಡೇಲಿ: ಎಮ್ಮೆ ಮೇಯಿಸಲು ಕಾಡಿಗೆ ಹೋಗಿದ್ದ ನಾನಾಕೆಸರೋಡಾದ ಮಹೇಶ್ ಪಾಟೀಲ್ (56) ಮೇಲೆ ಆನೆ ದಾಳಿ ನಡೆದಿದ್ದು, ಗಾಯಗೊಂಡ ಆತ ಆಸ್ಪತ್ರೆ ಸೇರಿದ್ದಾನೆ.
ನಾನಾಕೆಸರೋಡಾದ ಅರಣ್ಯ ಪ್ರದೇಶಕ್ಕೆ ಈತ ಪತ್ನಿ ಜೊತೆ ಎಮ್ಮೆಗಳನ್ನು ಹೊಡೆದುಕೊಂಡು ಹೋಗಿದ್ದ. ಹಾಗೇ ಮುಂದೆ ಹೋಗುತ್ತಿರುವಾಗ ಎದುರಾದ ಕಾಡಾನೆ ಈತನ ಮೇಲೆ ದಾಳಿ ನಡೆಸಿದ್ದು, ಅಡ್ಡಾದಿಡ್ಡಿ ಓಡಿ ಹೋಗಿ ಮಹೇಶ್ ಪಾಟೀಲ್ ತನ್ನ ಜೀವ ಉಳಿಸಿಕೊಂಡಿದ್ದಾನೆ. ಅದಾಗಿಯೂ ಆತನ ಕೈ-ಕಾಲಿಗೆ ಗಾಯವಾಗಿದೆ. ಈ ವೇಳೆ ಆತನ ಪತ್ನಿ ದೂರದಿಂದ ಬೊಬ್ಬೆ ಹೋಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದರು. ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಆತನ ಆರೋಗ್ಯ ವಿಚಾರಿಸಿದರು.