ಜೊಯಿಡಾ: ನಂದಿಗದ್ದೆ ಗ್ರಾ ಪಂ ವ್ಯಾಪ್ತಿಯ ಕರಿಯಾದಿ ತಿಮ್ಮಣ್ಣ ಗಾಂವ್ಕರ್ ಅವರ ಮನೆಗೆ ಬಂದಿದ್ದ ಹೆಬ್ಬಾವನ್ನು ಬುಧವಾರ ಬೆಳಗ್ಗೆ ಅರಣ್ಯ ಸಿಬ್ಬಂದಿ ಚೀಲದಲ್ಲಿ ಬಂಧಿಸಿದರು.
6 ಅಡಿ ಉದ್ದವಿದ್ದ ಈ ಹೆಬ್ಬಾವು ಇನ್ನೊಂದು ಜೀವಿಯನ್ನು ಭಕ್ಷಿಸಿ ಮನೆಯ ಹಿಂದೆ ಅಡಗಿ ಕುಳಿತಿತ್ತು. ಇದನ್ನು ನೋಡಿದ ಮನೆಯವರು ಅರಣ್ಯ ಇಲಾಖೆಯ ನೆರವು ಕೋರಿದ್ದರು. ಅರಣ್ಯ ರಕ್ಷಕ ಸಿದ್ದೇಶ್ವರ ಆಗಮಿಸಿ, ಸುರಕ್ಷಿತವಾಗಿ ಹಾವು ಹಿಡಿದರು. ನಂತರ ಅದನ್ನು ಅಲ್ಲಿಯೇ ಇದ್ದ ಕಾಡಿಗೆ ಬಿಡಲಾಯಿತು.