ಸಿದ್ದಾಪುರ: ಹೋಸೂರು ಗ್ರಾಮದಲ್ಲಿ ಪೂಜಾ ಮೆರವಣಿಗೆಗೆ ಹೋಗಿದ್ದ ಪುನೀತಕುಮಾರ ನಾಯ್ಕ ಎಂಬಾತರ ಮೇಲೆ ಮೂವರು ದೊಣ್ಣೆಯಿಂದ ಹೊಡೆದಿದ್ದಾರೆ.
ಹೋಸೂರಿನಲ್ಲಿ ಜು 2ರಂದು ದೇವರ ಪೂಜಾ ಮೆರವಣಿಗೆ ನಡೆಯುತ್ತಿತ್ತು. ಅದೇ ಊರಿನ ಪುನಿತಕುಮಾರ ನಾಯ್ಕ ಆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಆಗ ಅಲ್ಲಿಗೆ ದೊಣ್ಣೆ ಹಿಡಿದುಕೊಂಡು ಬಂದ ಸಂಪಗೇರಿಯ ನವೀನ್ ನಾಯ್ಕ, ವೆಂಕಟೇಶ ನಾಯ್ಕ ಹಾಗೂ ಗಣೇಶ ನಾಯ್ಕ ಎಂಬಾತರು ಪುನಿತಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ದೇವರ ಮೆರವಣಿಗೆ ಮುಂದೆಯೇ ಕೆಟ್ಟದಾಗಿ ಬೈದು ನಿಂದಿಸಿದ್ದಾರೆ. ಅದರಲ್ಲಿ ಒಬ್ಬ ಕಬ್ಬಿಣದ ರಾಡಿನಿಂದ ಪುನೀತಕುಮಾರರ ಮೇಲೆ ಹಲ್ಲೆ ಮಾಡಿದ್ದು, ಇದನ್ನು ಬಿಡಿಸಲು ಬಂದ ಜನಾರ್ಧನ ನಾಯ್ಕ\’ಗೂ ಆರೋಪಿತರು ಬೈದು ತಳ್ಳಾಟ ನಡೆಸಿದ್ದಾರೆ.
ಪ್ರತಿ ದೂರು
ಜೋಗ ಸರ್ಕಲ್ ಬಳಿ ನಿಂತಿರುವಾಗ ಪುನಿತಕುಮಾರ ನಾಯ್ಕ ಹಾಗೂ ನಾರಾಯಣ ನಾಯ್ಕ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನವೀನ್ ನಾಯ್ಕ ಸಹ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಜಗಳ ಬಿಡಿಸಲು ಬಂದ ಗಣೇಶ್ ನಾಯ್ಕ ಮೇಲೆಯೂ ಹಲ್ಲೆ ನಡೆಸಿದ ಬಗ್ಗೆ ಅವರು ದೂರಿದ್ದಾರೆ.