ಯಲ್ಲಾಪುರ: ಕಿರವತ್ತಿಯಲ್ಲಿ ಶೆಡ್ ನಿರ್ಮಿಸಿ ರಾಜಾರೋಷವಾಗಿ ಅಕ್ರಮ ಸರಾಯಿ ಮಾರುತ್ತಿದ್ದ ಶೇಖರ್ ಗೋಸಾವಿ ಎಂಬಾತನ ಮೇಲೆ ದಾಳಿ ನಡೆಸಿದ ಪಿಸೈ ಸಿದ್ದಪ್ಪ ಗುಡಿ ಆತನ ಬಳಿಯಿದ್ದ ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ಜಯಂತಿನಗರದಲ್ಲಿ ಗೂಡಂಗಡಿ ಹೊಂದಿದ್ದ ಶೇಖರ್ ಗೋಸಾವಿ ಗೂಡಂಗಡಿ ಪಕ್ಕದಲ್ಲಿಯೇ ಶೆಡ್ ನಿರ್ಮಿಸಿದ್ದ. ಗೂಡಂಗಡಿಯಿoದ ಶೆಡ್\’ಗೆ ಸರಾಯಿ ಸರಬರಾಜು ಮಾಡುತ್ತಿದ್ದ. ಅನೇಕರು ಶೆಡ್ಡಿನ ಒಳಗೆ ಬಂದು ಮದ್ಯ ಸೇವನೆ ಮಾಡುತ್ತಿದ್ದರು. ಆದರೆ, ಇದಕ್ಕೆ ಯಾವುದೇ ಪರವಾನಿಗೆಯನ್ನು ಆತ ಪಡೆದಿರಲಿಲ್ಲ. ಅಧಿಕೃತ ಬಾರ್ ಸಹ ಅದು ಆಗಿರಲಿಲ್ಲ. ಈ ವಿಷಯ ಅರಿತು ಜುಲೈ 3ರಂದು ದಾಳಿ ಮಾಡಿದ ಪೊಲೀಸರಿಗೆ ಶೆಡ್ಡಿನಲ್ಲಿ ವಿವಿಧ ಬಗೆಯ ಸರಾಯಿ ಪಾಕೆಟ್\’ಗಳು ದೊರೆತಿದೆ.