ಹೊನ್ನಾವರ: ಮಂಕಿ ಸಾರಸ್ವತಕೇರಿಯ ಮೋಹನ ನಾಯ್ಕ (53) ಎಂಬಾತರು ರೈಲು ಬಡಿದು ಸಾವನಪ್ಪಿದ್ದಾರೆ.
ಜೂ 3ರಂದು ಬೆಳಗ್ಗೆ ಕೂಲಿ ಕೆಲಸಕ್ಕೆ ಹೊರಟ ಅವರು ಸಂಜೆಯಾದರೂ ಮನೆಗೆ ಮರಳಿಲ್ಲ. ರಾತ್ರಿ ರೈಲ್ವೆ ಕ್ವಾಟರ್ಸ ಬಳಿ ಅವರಿಗೆ ರೈಲು ಗುದ್ದಿದ್ದು, ತಲೆ ಛಿದ್ರವಾಗಿದೆ. ಮರುದಿನ ಬೆಳಗ್ಗೆ ಅವರು ಸಾವನಪ್ಪಿರುವುದು ಗೊತ್ತಾಗಿದ್ದು, ಅವರ ಪುತ್ರ ದರ್ಶನ್ ನಾಯ್ಕ ಶವ ನೋಡಿ ಕಣ್ಣೀರಾದರು.