ಕುಮಟಾ – ಶಿರಸಿ ಹೆದ್ದಾರಿಯ ಕತಗಾಲ ಬಳಿ ಚಂಡಿಕಾ ಹೊಳೆಯ ನೀರು ರಸ್ತೆಯ ಮೇಲೆ ಹರಿದಿದೆ. ಇದರಿಂದ ಈ ಭಾಗದಲ್ಲಿ ಸಂಚರಿಸುತ್ತಿದ್ದ ಬಸ್ಸು ಅಪಾಯಕ್ಕೆ ಸಿಲುಕಿದ್ದು, ಪ್ರಯಾಣಿಕರನ್ನು ದೋಣಿಯ ಮೂಲಕ ರಕ್ಷಿಸಲಾಯಿತು. ನೀರು ನಿಂತಿದ್ದರೂ ಬಸ್ಸಿನ ಚಾಲಕ ಅಲ್ಲಿಯೇ ತನ್ನ ವಾಹನ ಓಡಿಸಿದ್ದು, ನಡುದಾರಿಯಲ್ಲಿ ಬಸ್ಸು ಹಾಳಾಗಿದೆ. ಇದಾದ ನಂತರ ಬಸ್ಸಿನ ಚಾಲಕ ಅಲ್ಲಿಂದ ನಾಪತ್ತೆಯಾಗಿದ್ದಾನೆ. ಆತಂಕಗೊAಡ ಜನ ಬೊಬ್ಬೆ ಹಾಕಿದ್ದು, ತಕ್ಷಣ ಸ್ಥಳೀಯರು ದೋಣಿ ತಂದು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಈ ಭಾಗದ ಅಡಿಕೆ ತೋಟಗಳಿಗೆ ಸಹ ನೀರು ನುಗ್ಗಿದೆ. ರಸ್ತೆಯ ಮೇಲೆ ನೀರು ನಿಂತಿದ್ದರಿAದ ಹಲವು ವಾಹನ ಸವಾರರು ತೊಂದರೆ ಅನುಭವಿಸಿದರು.