ಶಿರಸಿ: ಸೊರಬದಲ್ಲಿ ಕೂಲಿ ಕೆಲಸ ಮಾಡುವುದನ್ನು ಬಿಟ್ಟು ಶಿರಸಿಗೆ ಬಂದು ಜೂಜಾಟ ನಡೆಸುತ್ತಿದ್ದ ಪ್ರವೀಣಕುಮಾರ ಕುಂಬಾರ ಎಂಬಾತನ ಮೇಲೆ ಬನವಾಸಿ ಠಾಣೆ ಪಿಸೈ ಚಂದ್ರಕಲಾ ಪತ್ತಾರ್ ದಾಳಿ ನಡೆಸಿದ್ದಾರೆ.
ಸೊರಬ ತಾಲೂಕಿನ ಭದ್ರಾಪುರದ ಪ್ರವೀಣಕುಮಾರ ಜೂ 3ರಂದು ಬನವಾಸಿಯ ಅಜ್ಜರಣಕೇರಿ ಬಳಿ ಜೂಜಾಟ ನಡೆಸಿದ್ದ. ರಸ್ತೆಯಲ್ಲಿ ಹೋಗುವ ಸಾರ್ವಜನಿಕರನ್ನು ಕರೆದು ತನ್ನಲ್ಲಿ ಹಣ ಹೂಡವಂತೆ ಪೀಡಿಸುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನ ಮೇಲೆ ದಾಳಿ ನಡೆಸಿ, ಜೂಜಾಟದ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ.