ಹೊನ್ನಾವರದಲ್ಲಿ ನೆರೆ ಪ್ರವಾಹದಿಂದ ಸಂತ್ರಸ್ತರಾದವರಿಗೆ ಗುಂಡುಬಾಳದ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ಕ್ರಿಮಿ-ಕೀಟಗಳ ಕಾಟ ಸಹಿಸಿಕೊಂಡು ಸಂತ್ರಸ್ತರು ರಾತ್ರಿ ಕಳೆದರು. ಇಲ್ಲಿ ವಿದ್ಯುತ್ ಸಮಸ್ಯೆ ಇರುವ ಬಗ್ಗೆ ಅವರು ದೂರಿದ್ದು, ಜರನೇಟರ್ ಒದಗಿಸಿ ಎಂದು ಅಧಿಕಾರಿಗಳ ಬಳಿ ಬೇಡಿಕೆ ಇಟ್ಟರು. ಆಗ ಅಧಿಕಾರಿಗಳು ಮೇಣದಬತ್ತಿ ಒದಗಿಸುವ ಭರವಸೆ ನೀಡಿದ್ದು, ಇದಕ್ಕೆ ಸಂತ್ರಸ್ತರು ಅಸಮಧಾನ ವ್ಯಕ್ತಪಡಿಸಿದರು. ಕಾಳಜಿ ಕೇಂದ್ರದಲ್ಲಿ ನೀರಿನ ವ್ಯವಸ್ಥೆ ಇಲ್ಲ. ಕಾಳಜಿ ಕೇಂದ್ರಕ್ಕೆ ಬರುವ ರಸ್ತೆ ಸಹ ಹಾಳಾಗಿದೆ. ಪ್ರತಿ ವರ್ಷ ಇಲ್ಲಿನವರಿಗೆ ಇದೇ ಸಮಸ್ಯೆ ಎಂದು ಜನ ದೂರಿದರು.