ಯಲ್ಲಾಪುರ: ದೇವಿಕೊಪ್ಪದ ಮಂಜುನಾಥ ಹರನ್ನವರ್ ಎಂಬಾತನ ಬೈಕಿಗೆ ಹುಣಶೆಟ್ಟಿಕೊಪ್ಪದ ಬಳಿ ಬೀಡಾಡಿ ದನ ಡಿಕ್ಕಿಯಾಗಿದ್ದು, ಬೈಕಿನಿಂದ ಬಿದ್ದು ಆತ ಗಾಯಗೊಂಡಿದ್ದಾನೆ.
ಜುಲೈ 3ರ ರಾತ್ರಿ ಆತ ಬೈಕ್ ಮೂಲಕ ಚಲಿಸುತ್ತಿದ್ದಾಗ ಈ ಅವಘಡ ನಡೆದಿದೆ. ಇದರಿಂದ ಬೈಕ್ ಸಹ ಜಖಂ ಆಗಿದ್ದು, ಮಂಜುನಾಥ ಅವರ ಎರಡು ಕೈ ಮುರಿದಿದೆ. ಜೊತೆಗೆ ಹೊಟ್ಟೆ ಹಾಗೂ ಮುಖಕ್ಕೆ ಸಹ ಗಾಯವಾಗಿದೆ.