
ಜೊಯಿಡಾ: ಶಾಲೆಯಿಂದ ಮನೆಗೆ ಮರಳುತ್ತಿದ್ದ ಗವೇಗಾಳಿಯ ಶ್ರೇಯಾ ಕುಶಾಲಕರ್ (6) ಎಂಬಾಕೆಗೆ ಸುಬಾನಿ ಬಡೆಗಿರಾನಿ ಎಂಬಾತ ಬೈಕ್ ಗುದ್ದಿದ್ದು, ಗಾಯಗೊಂಡ ಆಕೆ ಚಿಕಿತ್ಸೆಗಾಗಿ ಧಾರವಾಡದ ಆಸ್ಪತ್ರೆ ಸೇರಿದ್ದಾಳೆ.
ಜುಲೈ 4ರಂದು ಮಧ್ಯಾಹ್ನ ಶ್ರೇಯಾ ಶಾಲೆಯಿಂದ ಮನೆಗೆ ಬರುತ್ತಿದ್ದಳು. ಆಗ ಓಡಿಸಿಕೊಂಡು ಬಂದ ಜೊಯಿಡಾದ ಸುಬಾನಿ ಬಡೆಗಿರಾನಿ ಏಕಾಏಕಿ ಎಡಕ್ಕೆ ಬೈಕ್ ತಿರುಗಿಸಿ ಆಕೆಗೆ ಹಿಂದಿನಿoದ ಗುದ್ದಿದ್ದಾನೆ. ಇದರಿಂದ ಬಾಲಕಿಯ ಹಣೆ, ತಲೆ, ಮೂಗು ಮತ್ತು ಕಾಲಿಗೆ ಗಾಯವಾಗಿದೆ.