ಸಿದ್ದಾಪುರ: ಸಿದ್ದಿವಿನಾಯಕ ಆಂಗ್ಲಮಾಧ್ಯಮ ಪ್ರೌಢಶಾಲಾ ಸಭಾಂಗಣದಲ್ಲಿ ಯಕ್ಷ ಚಂದನ ದಂಟಕಲ್ ಅವರಿಂದ ಪ್ರತಿ ಶನಿವಾರ ಮಧ್ಯಾಹ್ನ 2 ತಾಸು ಯಕ್ಷಗಾನ ತರಬೇತಿ ನಡೆಯಲಿದೆ.
ಮಧ್ಯಾಹ್ನ 2ರಿಂದ 4 ಗಂಟೆಯವೆಗೆ ಈ ಯಕ್ಷಗಾನ ರಂಗ ತರಬೇತಿ ಶಿಬಿರ ಆಯೋಜಿಸಲಾಗಿದ್ದು, ಜುಲೈ 7ರಂದು ಮಧ್ಯಾಹ್ನ 2ಗಂಟೆಗೆ ಶಶಿಭೂಷಣ ಹೆಗಡೆ ಇದನ್ನು ಉದ್ಘಾಟಿಸಲಿದ್ದಾರೆ. ನರೇಂದ್ರ ಹೆಗಡೆ ಅತ್ತಿಮುರುಡು ಹಾಗೂ ನಿತಿನ್ ಹೆಗಡೆ ದಂಟಕಲ್ ತರಬೇತಿ ನಡೆಸಿಕೊಡುತ್ತಾರೆ. ಯಕ್ಷಗಾನದಲ್ಲಿ ಆಸಕ್ತಿ ಇರುವ 10 ವರ್ಷ ಮೇಲ್ಪಟ್ಟ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದು. ಮಾಹಿತಿಗೆ 9448821204 ಅಥವಾ 9380721906 ಸಂಪರ್ಕಿಸಿ.