ಯಲ್ಲಾಪುರ: ಸಂಕಲ್ಪ ಸೇವಾ ಸಂಸ್ಥೆ ಮುಖ್ಯಸ್ಥ ಪ್ರಮೋದ ಹೆಗಡೆ ತಾವು ಸ್ಥಾಪಿಸಿದ `ಮೌನ ಗೃಂಥಾಲಯ\’ದಲ್ಲಿ ಮಕ್ಕಳ ಜೊತೆ ಕಾಲ ಕಳೆದರು.
ವಿಶ್ವದರ್ಶನ ಸಮೂಹದ ವಿಜಯ ಸಂಕೇಶ್ವರ ಮಿಡಿಯಾ ಸ್ಕೂಲ್ ವಿದ್ಯಾರ್ಥಿಗಳನ್ನು ಮೌನ ಗೃಂಥಾಲಯಕ್ಕೆ ಬರಮಾಡಿಕೊಂಡ ಅವರು ತಮ್ಮ ಸಂಗ್ರಹದಲ್ಲಿದ್ದ ಪುಸ್ತಕಗಳ ಪರಿಚಯ ಮಾಡಿದರು. `ಸೋಲು, ಬಡತನ ಶಾಪವಲ್ಲ. ಕೀಳರಿಮೆ, ಆತ್ಮವಿಶ್ವಾಸದ ಕೊರತೆಯೇ ದೊಡ್ಡ ಶಾಪ. ಆತ್ಮಸ್ಥೈರ್ಯ, ಛಲದಿಂದ ಶ್ರಮಿಸಿದರೆ ಎಲ್ಲವನ್ನೂ ಮೀರಿ ಬೆಳೆದು, ಸಾಧಿಸಲು ಸಾಧ್ಯ\’ ಎಂದು ಮಕ್ಕಳಿಗೆ ಅವರು ಕಿವಿಮಾತು ಹೇಳಿದರು. `ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಹೆಚ್ಚಾಗಿ ಬೆಳೆಯಬೇಕು. ನಿರಂತರ ಅಧ್ಯಯನದಿಂದ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ\’ ಎಂದು ತಮ್ಮ ಅನುಭವ ಹಂಚಿಕೊoಡರು.
ಈ ವೇಳೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ವೈಟಿಎಸ್ಎಸ್\’ನ ನಿವೃತ್ತ ಪ್ರಾಚಾರ್ಯ ಬೀರಣ್ಣ ನಾಯಕ ಮೊಗಟಾ, ಪ್ರಮುಖರಾದ ಸ್ಫೂರ್ತಿ ಹೆಗಡೆ, ನಾಗರಾಜ ಇಳೆಗುಂಡಿ ಇದ್ದರು.
ಓದುವ ಹವ್ಯಾಸ ಇದ್ದವರಿಗೆ `ಮೌನ ಗೃಂಥಾಲಯ\’ದಲ್ಲಿ ಸಾವಿರ ಸಂಖ್ಯೆಯ ಅಪರೂಪದ ಪುಸ್ತಕಗಳಿವೆ. ಆಸಕ್ತಿಯಿಂದ ಓದಿ, ಜೋಪಾನವಾಗಿರಿಸುವುದು ಮಾತ್ರ ಓದುಗರ ಜವಾಬ್ದಾರಿ.