ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ ನೂತನ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಶನಿವಾರ ಅಧಿಕಾರ ಸ್ವೀಕರಿಸಿದ್ದು, ಜಿಲ್ಲಾಧಿಕಾರಿಯಾಗಿ ತಮ್ಮ ಮೊದಲ ಕಡತಕ್ಕೆ ಸಹಿ ಮಾಡಿದರು.
ಜಿಲ್ಲಾಧಿಕಾರಿ ಕಚೇರಿ ಆವರಣವನ್ನು ಗಮನಿಸಿದ ಅವರು ಕೆಲ ಸಿಬ್ಬಂದಿ ಪರಿಚಯ ಮಾಡಿಕೊಂಡರು. ಹೊಸ ಜಿಲ್ಲಾಧಿಕಾರಿಗಳನ್ನು ಅಧೀನ ಅಧಿಕಾರಿ ಹಾಗೂ ಸಿಬ್ಬಂದಿ ಆತ್ಮೀಯವಾಗಿ ಬರಮಾಡಿಕೊಂಡರು. ಪ್ರಸ್ತುತ ಜಿಲ್ಲೆಯಲ್ಲಿ ಮಳೆಯ ವಾತಾವರಣವಿದ್ದು, ಅದಕ್ಕೆ ಸಂಬoಧಿಸಿದ ಮಾಹಿತಿಗಳನ್ನು ಪಡೆದರು. ಪ್ರವಾಹದ ಕುರಿತು ಸಾಕಷ್ಟು ಮುನ್ನಚ್ಚರಿಕೆವಹಿಸುವಂತೆ ಸೂಚಿಸಿದರು.