ಅಂಕೋಲಾ: ಮಂಗಳೂರಿನಿoದ ಪೋರಬಂದರ್\’ಗೆ ಸಂಚರಿಸುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಂಗಳೂರಿನ ಮೀನಾಕ್ಷಿ ಗಂಗೋರಿ ಎಂಬಾತರ ಐಫೋನ್\’ನ್ನು ಕಳ್ಳರು ದೋಚಿದ್ದಾರೆ.
ಇದರ ಜೊತೆ ಅವರ ಬಳಿಯಿದ್ದ ಪಾನ್ ಕಾರ್ಡ ಹಾಗೂ 500ರೂ ಸಹ ಕಳ್ಳರ ಪಾಲಾಗಿದೆ. ಜೂನ್ 24ರಂದು ಸ್ಲೀಪರ್ ಕ್ಲಾಸಿನ ಟಿಕೆಟ್ ಪಡೆದು ಅವರು ಪ್ರಯಾಣ ಮಾಡುತ್ತಿದ್ದರು. ರೈಲು ಬೆಳಗ್ಗೆ 1.15ರ ವೇಳೆಗೆ ಗೋಕರ್ಣದಲ್ಲಿ ನಿಂತಾಗ ಕಳ್ಳರು ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ. ಐಫೋನ್ ಬೆಲೆ 30 ಸಾವಿರ ರೂ ಆಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಆರ್ ಪಿ ಎಫ್ ಪೊಲೀಸರು ಇದಿಗ ಪ್ರಕರಣವನ್ನು ಅಂಕೋಲಾ ಪೊಲೀಸರಿಗೆ ವರ್ಗಾಯಿಸಿದ್ದಾರೆ.