ಹಳಿಯಾಳ: ಗೌಳಿವಾಡದ ರಾಮು ತೋರತ್ ಎಂಬಾತ ತನ್ನ ಮನೆಯ ಹಿತ್ತಲಿನಲ್ಲಿ ಗಾಂಜಾ ಬೆಳೆದಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ.
ಜತಗಾ ಗ್ರಾಮದಲ್ಲಿ ರಾಮು ತೋರತ್ ಗಾಂಜಾ ಬೀಜಗಳನ್ನು ಬಿತ್ತಿದ್ದ. 13 ಗಾಂಜಾ ಗಿಡಗಳು ದಷ್ಟಪುಷ್ಟವಾಗಿ ಬೆಳೆದು 12.8 ಕೆಜಿ ತೂಗುತ್ತಿದ್ದವು. ಈ ವಿಷಯ ಅರಿತು ಜುಲೈ 5ರಂದು ಸಂಜೆ ದಾಂಡೇಲಿ ಡಿವೈಎಸ್ಪಿ ಜೊತೆ ಪಿಸೈ ವಿನೋದ ಎಸ್ ಕೆ ಅವರು ದಾಳಿ ನಡೆಸಿದರು. ಕಟಾವಿಗೆ ಸಿದ್ಧಗೊಂಡಿದ್ದ ಗಾಂಜಾ ಗಿಡಗಳನ್ನು ಪೊಲೀಸರು ನಾಶ ಮಾಡಿದರು. ಕಾಳಸಂತೆಯಲ್ಲಿ ಈ ಬಗೆಯ ಹಸಿ ಗಾಂಜಾ ಗಿಡಗಳು ಅಂದಾಜು 80 ಸಾವಿರ ರೂ ಆಸುಪಾಸಿನಲ್ಲಿ ಮಾರಾಟವಾಗುತ್ತದೆ.