ಶಿರಸಿ: ಯಕ್ಷಗಾನ ಕಲಾವಿದರಾಗಿದ್ದ ಕಂಚಿಕೈಯ ಕೃಷ್ಣ ಗೋವಿಂದ ಹೆಗಡೆ ಗದ್ದೆಮನೆ ಅವರ ನಿಧನವಾಗಿರುವುದಕ್ಕೆ ಸಂತಾಪ ಸೂಚಿಸಿ, ಶ್ರದ್ಧಾಂಜಲಿ ಸಭೆ ಮತ್ತು ಯಕ್ಷಗಾನ ತಾಳಮದ್ದಳೆ\’ ನಡೆಯಿತು.
ಶರಸೇತು ಬಂಧನ ಆಖ್ಯಾನದ ತಾಳಮದ್ದಳೆ ಪ್ರಸಂಗದ ಹಿಮ್ಮೇಳದಲ್ಲಿ ಎಂ.ಪಿ ಹೆಗಡೆ ಉಲ್ಲಾಳಗದೆ ಭಾಗವತವಾಗಿ ಮತ್ತು ಗಜಾನನ ಹೆಗಡೆ ಕಂಚಿಕೈ ಭಾಗವಹಿಸಿದ್ದರು. ಅರ್ಥದಾರಿಗಳಾಗಿ ಆರ್.ಟಿ ಭಟ್ಟ ಕಬ್ಗಾಲ, ನಾಗಪತಿ ಹೆಗಡೆ ಕಂಚಿಕೈ ಮತ್ತು ನಾರಾಯಣ ಹೆಗಡೆ ಕಡಕಾರ ಪಾಲ್ಗೊಂಡರು. ಕಲಾವಿದರಾಗಿದ್ದ ಕೃಷ್ಣ ಹೆಗಡೆ ಕುರಿತು ಆರ್.ಟಿ ಭಟ್ಟ ಮತ್ತು ಕೃಷ್ಣಮೂರ್ತಿ ಹೆಗಡೆ, ಉಮಾಪತಿ ಭಟ್ಟ ಗುಬ್ಬಗೋಡು, ಪ್ರಭಾಕರ ಹೆಗಡೆ, ನಾಗರಾಜ ಹೆಗಡೆ ಹಾಗೂ ಬಂಧು ಬಳಗದವರು ಉಪಸ್ಥಿತರಿದ್ದರು.
ಯಕ್ಷಗಾನ ಮಂಡಳಿಯ ಅಧ್ಯಕ್ಷ ಸತೀಶ ಹೆಗಡೆ ಸ್ವಾಗತಿಸಿದರು. ಪ್ರಿಯಾಂಕಾ ಹೆಗಡೆ ನಿರ್ವಹಿಸಿದರು.