ಹೊನ್ನಾವರ: `ಕತಗಾಲ್ ಸೇತುವೆ ಮೇಲೆ ಸಂಚರಿಸುತ್ತಿದ್ದ ಶ್ರೀಕುಮಾರ ಬಸ್ ಮುಂದೆ ಸಂಚರಿಸಲಾಗದೇ ಪ್ರಯಾಣಿಕರು ತೊಂದರೆ ಅನುಭವಿಸಿದ್ದು, ಬಸ್ಸಿನ ಉಸ್ತುವಾರಿಗಳಿಗೆ ಸಂಪರ್ಕಿಸಿದರೂ ಸ್ಪಂದಿಸಿಲ್ಲ\’ ಎಂದು ಪ್ರಯಾಣಿಕ ಶ್ರೀನಿವಾಸ ನಾಯ್ಕ ಮಾಡಿದ ವಿಡಿಯೋ ವೈರಲ್ ಆಗಿದೆ.
ಹೊನ್ನಾವರ ಪಟ್ಟಣದ ರಾಯಲ್ಕೇರಿಯ ಶ್ರೀನಿವಾಸ ನಾಯ್ಕ ಜೊತೆ ಅವರ ಕುಟುಂಬದ ಇಬ್ಬರು ಶ್ರೀಕುಮಾರ ಬಸ್ ಮೂಲಕ ಬೆಂಗಳೂರಿನಿAದ ಶಿರಸಿ ಮಾರ್ಗವಾಗಿ ಹೊನ್ನಾವರ ಹೊರಟಿದ್ದರು. ಇದಕ್ಕಾಗಿ `ರೆಡ್ ಬಸ್\’ ಆಫ್ ಮೂಲಕ ಅವರು ಟಿಕೆಟ್ ಕಾಯ್ದಿರಿಸಿದ್ದು, ಅದಕ್ಕೆ ವಿಮೆಯನ್ನು ಸಹ ಪಡೆದಿದ್ದರು. ಆದರೆ, ಕುಮಟಾದ ಕತಗಾಲ್ ಬಳಿಯ ಸೇತುವೆ ಮೇಲೆ ಬಸ್ ಹಾಳಾಗಿದ್ದು, ಬೇರೆ ಬಸ್ ಕಳುಹಿಸುವಂತೆ ತಿಳಿಸಿದರೂ ಸ್ಪಂದನೆ ಸಿಗಲಿಲ್ಲ ಎಂದವರು ಅವಲತ್ತುಕೊಂಡಿದ್ದಾರೆ. ಇದಾದ ನಂತರ ಬೇರೆ ಕಾರ್ ಮೂಲಕ ಮನೆ ಸೇರಿರುವುದಾಗಿ ಅವರು ಹೇಳಿದ್ದಾರೆ.