ಕುಮಟಾ ತಾಲೂಕಿನ ಕೋನಳ್ಳಿ ಕಾಳಜಿ ಕೇಂದ್ರವನ್ನು ಮುಚ್ಚಲಾಗಿದ್ದು, ಇಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತರು ಇದೀಗ ಮನೆಗೆ ಮರಳಿದ್ದಾರೆ. ಮನೆ ಮುಂದೆ ನಡೆದ ನೆರೆ ಪ್ರವಾಹದ ಹಾನಿ ನೋಡಿ ಕಣ್ಣೀರಾಗಿದ್ದಾರೆ.
ಏಕಾಏಕಿ ಸುರಿದ ಮಳೆಯಿಂದಾಗಿ ಕೋನಳ್ಳಿ ಹಾಗೂ ಸುತ್ತಲಿನ ಪ್ರದೇಶ ಜಲಾವೃತವಾಗಿತ್ತು. ಹೀಗಾಗಿ ಕೋನಳ್ಳಿ ಶಾಲೆ ಬಳಿ ಕಾಳಜಿ ಕೇಂದ್ರ ತೆರೆದಿದ್ದು, 60ಕ್ಕೂ ಅಧಿಕ ಜನ ಅಲ್ಲಿ ಆಶ್ರಯ ಪಡೆದಿದ್ದರು. ಇದೀಗ ಮಳೆ ಪ್ರಮಾಣ ಕಡಿಮೆ ಆಗಿದ್ದರಿಂದ ಜನ ಮರಳಿದ್ದು, ಕಾಳಜಿ ಕೇಂದ್ರ ಖಾಲಿ ಆಗಿರುವುದರಿಂದ ಅದನ್ನು ಮುಚ್ಚಲಾಗಿದೆ. ಏಕಾಏಕಿ ನೀರು ನುಗ್ಗಿದ್ದರಿಂದ ಕೆಲವರ ಮನೆಯೊಳಗಿನ ಸಾಮಗ್ರಿಗಳು ಹಾಳಾಗಿದೆ. ಇನ್ನೂ ಕೆಲವು ಅಸ್ತವ್ಯಸ್ಥಗೊಂಡಿದೆ. ಮನೆಯನ್ನು ಬಳಗಿ ಸಾಮಗ್ರಿಗಳನ್ನು ಎತ್ತಿಡುವ ಕಾರ್ಯದಲ್ಲಿ ಸಂತ್ರಸ್ತರಿದ್ದಾರೆ.