ಶಿರಸಿಯಲ್ಲಿ 5ನೇ ತರಗತಿ ಓದುತ್ತಿದ್ದ ಸುಹನಾ ಎಂಬಾಕೆ ಸಾವನಪ್ಪಿದ್ದು, ಈಕೆ ಡೆಂಗ್ಯು ಜ್ವರದಿಂದ ಮೃತಪಟ್ಟಿರುವ ಬಗ್ಗೆ ಶಂಕಿಸಲಾಗಿದೆ.
ತೀವ್ರ ಪ್ರಮಾಣದ ಜ್ವರದಿಂದ ಬಳಲುತ್ತಿದ್ದ ಈಕೆಗೆ ಕೈ-ಕಾಲು ನೋವು ಸಹ ಕಾಣಿಸಿಕೊಂಡಿತ್ತು. ಕಸ್ತೂರಿಬಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಈಕೆ ಚಿಕಿತ್ಸೆಗೆ ದಾಖಲಾಗಿದ್ದಳು. ವೈದ್ಯರು ಇದನ್ನು ಡೆಂಗ್ಯು ಜ್ವರ ಎಂದು ಪರಿಗಣಿಸಿದ್ದರು. ಜ್ವರ ಕಡಿಮೆ ಆಗದ ಕಾರಣ ಆಕೆಯನ್ನು ಬೇರೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಆಕೆ ಸಾವನಪ್ಪಿದ್ದಾಳೆ.