ಶಿರಸಿ: ಯಲ್ಲಾಪುರ ತಾಲೂಕಿನ ವಿವಿಧ ಭಾಗದ ಜನ ಶನಿವಾರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿದ್ದು, ತಮ್ಮ ಸಮಸ್ಯೆ ಹೇಳಿಕೊಂಡರು.
ಅದರಲ್ಲಿಯೂ ಮುಖ್ಯವಾಗಿ ಬಿಸಗೋಡಿನ ಕಟ್ಟಡ ತೆರವು ವಿಚಾರವಾಗಿ ಆ ಭಾಗದವರು ಸಂಸದರಿಗೆ ತಿಳಿಸಿದ್ದು, ಇದಕ್ಕೆ ಶಾಶ್ವತ ಪರಿಹಾರ ಅಗತ್ಯ ಎಂದು ಮನವಿ ಮಾಡಿದರು. ಇದಕ್ಕೆ ಇದಕ್ಕೆ ಸಂಸದರು ಪೂರಕವಗಿ ಸ್ಪಂದಿಸಿದ ಬಗ್ಗೆ ಆರ್ ಜಿ ಭಟ್ಟ ಬಿಸಗೋಡು ಸಂತಸ ವ್ಯಕ್ತಪಡಿಸಿದರು. ಬಿ ಎಸ್ ಎನ್ ಎಲ್ ಸಂಸ್ಥೆಯ ಸೇವೆಗಳಲ್ಲಿನ ಲೋಪಗಳ ಕುರಿತು ಕಳೆಚೆಯ ಉಮೇಶ ಭಾಗ್ವತ್ ದೂರಿದರು. ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಅವರ ಜೊತೆ ಈ ನಿಯೋಗ ಸಂಸದರ ಕಚೇರಿಗೆ ತೆರಳಿತ್ತು. ನಿಯೋಗದಲ್ಲಿ ಪ್ರಮುಖರಾದ ಗಣಪತಿ ಬೋಳಗುಡ್ಡೆ, ಗಣಪತಿ ಮಾನಿಗದ್ದೆ, ದತ್ತಾತ್ರೆಯ ಬೋಳುಗುಡ್ಡೆ ಇತರರು ಇದ್ದರು.