ಹಳಿಯಾಳದ ಬಹುತೇಕ ಹಳ್ಳಿಗಳಲ್ಲಿ ಅಕ್ರಮ ಸರಾಯಿ ಮಾರಾಟ ನಡೆಯುತ್ತಿದ್ದು, ಇದನ್ನು ನಿಷೇಧಿಸಬೇಕು ಎಂದು ಅಲ್ಲಿನವರು ಆಗ್ರಹಿಸಿದ್ದಾರೆ.
`ಅದರಲ್ಲಿಯೂ ಮುಖ್ಯವಾಗಿ ಮಂಗಳವಾಡದ ಬೀದಿ ಬೀದಿಗಳಲ್ಲಿ ಸರಾಯಿ ಮಾರಾಟ ನಡೆಯುತ್ತಿದೆ. ಇದನ್ನು ತಡೆಯದಿದ್ದಲ್ಲಿ ಕೃಷಿ ಕೆಲಸ ತೊರೆದಾದರೂ ಹೋರಾಟ ನಡೆಸುತ್ತೇವೆ\’ ಎಂದು ಊರಿನವರು ಎಚ್ಚರಿಸಿದ್ದಾರೆ.`ಗ್ರಾಮದಲ್ಲಿ ಆರಂಭಗೊoಡಿರುವ ಅಕ್ರಮ ಸಾರಾಯಿ ಮಾರಾಟದಿಂದ ಇಡೀ ಗ್ರಾಮದ ಶಾಂತಿ ನೆಮ್ಮದಿ ಕದಡಿದೆ. ಗ್ರಾಮದ ಯುವಕರು, ಪ್ರೌಢಶಾಲಾ ಮಕ್ಕಳು ಸಹ ದುಶ್ಚಟಕ್ಕೆ ಬಲಿಯಾಗಿದ್ದಾರೆ. ಇದರಿಂದ ಮನೆಯಲ್ಲಿ ಪಾಲಕರ ಕುಟುಂಬದ ಸ್ಥಿತಿ ಹಾಳಾಗಿದ್ದು, ಅಮಲಿನಲ್ಲಿರುವ ಮಕ್ಕಳು – ಯುವಕರು ಯಾರ ಮಾತನ್ನು ಕೇಳುತ್ತಿಲ್ಲ\’ ಎಂಬುದು ಅಲ್ಲಿನವರ ನೋವು. ಮಂಗಳವಾಡ ಸೇರಿದಂತೆ ಗ್ರಾಮಾಂತರ ಭಾಗದಲ್ಲಿನ ಹೊಟೇಲು, ಗೂಡಂಗಡಿಗಳು, ಪಾನ್ ಬೀಡಾ ಅಂಗಡಿಗಳಲ್ಲಿ ನಡೆದಿರುವ ಅಕ್ರಮ ಸಾರಾಯಿ ಮಾರಾಟ ತಕ್ಷಣ ನಿಷೇಧಿಸಬೇಕು\’ ಎಂದು ಆಗ್ರಹಿಸಿದ್ದಾರೆ.
ಮಂಗಳವಾಡ ಗ್ರಾಮದ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ತಾಲೂಕು ಆಡಳಿತ ಸೌಧಕ್ಕೆ ತೆರಳಿ ಈ ಕುರಿತು ಪ್ರತಿಭಟಿಸಿದರು. ನಂತರ ತಾಲೂಕಾಡಳಿತಕ್ಕೆ ಈ ಬಗ್ಗೆ ಮನವಿ ಸಲ್ಲಿಸಿದರು.