ಯಲ್ಲಾಪುರ: ಪ್ರಧಾನ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಕೃಷಿ ಸಂವಾದ ನಡೆಸಿದ ಜಂಬೆಸಾಲಿನ ಶ್ರೀಲತಾ ಹೆಗಡೆ ಅವರ ಮನೆ ಭೇಟಿ ಮಾಡಿದ ಬಿಜೆಪಿ ಘಟಕದವರು ಸಾಧಕ ಮಹಿಳೆಯನ್ನು ಗೌರವಿಸಿದರು.
10 ಗುಂಟೆ ಕ್ಷೇತ್ರದಲ್ಲಿ ಅಚ್ಚುಕಟ್ಟಾಗಿ ಪುಷ್ಪಕೃಷಿ ಮಾಡಿದ್ದ ಅವರು `ಕೃಷಿ ಸಖಿ\’ಯಾಗಿ ಗುರುತಿಸಿಕೊಂಡಿದ್ದರು. ಇದರೊಂದಿಗೆ ಗೋಸೇವೆ, ಸ್ವ ಸಹಾಯ ಸಂಘಗಗಳಿಗೆ ನೆರವು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಸಕ್ರೀಯವಾಗಿದ್ದರು. ಈ ಎಲ್ಲಾ ಹಿನ್ನಲೆ ಪರಿಗಣಿಸಿ ಅವರನ್ನು ವಾರಣಾಸಿಯಲ್ಲಿ ನಡೆದ ಕಿಸಾನ ಸಮ್ಮಾನ ಸಮ್ಮೇಳನಕ್ಕೆ ಆಮಂತ್ರಿಸಲಾಗಿತ್ತು. ಅಲ್ಲಿ ಭಾಗವಹಿಸಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಸಂವಾದ ನಡೆಸಿ, `ಕೃಷಿ ವಿಷಯದಲ್ಲಿ ಮಹಿಳೆಯರಿಗೆ ಸರ್ಕಾರದ ಪ್ರೋತ್ಸಾಹ ಅಗತ್ಯ\’ ಎಂದು ಪ್ರತಿಪಾದಿಸಿದ್ದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹ ಒಮ್ಮತ ಸೂಚಿಸಿದ್ದರು.
ಶ್ರೀಲತಾ ಅವರ ಈ ಸಾಧನೆಯನ್ನು ಪರಿಗಣಿಸಿದ ಬಿಜೆಪಿಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಶ್ರುತಿ ಹೆಗಡೆ ಅವರ ಮನೆಗೆ ತೆರಳಿ ಸನ್ಮಾನಿಸಿದರು. ಈ ವೇಳೆ ಮಹಿಳಾ ಮೋರ್ಚಾದ ಚಂದ್ರಕಲಾ ಭಟ್ಟ ಅವರು ಪ್ರಧಾನಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನುಭವಗಳ ಕುರಿತು ಪ್ರಶ್ನಿಸಿ, ಉತ್ತರ ಪಡೆದರು.
ಪ್ರಮುಖರಾದ ಶ್ಯಾಮಿಲಿ ಪಾಟಣಕರ, ನಿರ್ಮಲಾ ನಾಯ್ಕ, ಕಲ್ಪನಾ ನಾಯ್ಕ, ಸುನೀತಾ ವೇರ್ಣೇಕರ, ವೀಣಾ ಗಾಂವ್ಕರ ಇತರರು ಮಹಿಳೆಯ ಸಾಧನೆ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ಜಿ ಎನ್ ಗಾಂವ್ಕರ್ ನಾಗರಾಜ ಕವಡಿಕೇರಿ, ನಟರಾಜ ಗೌಡ, ರವಿ ಕೈಟ್ಕರ, ಅಪ್ಪು ಆಚಾರಿ,ಸುಬ್ಬಣ್ಣ ಉದ್ದಾಬೈಲ, ಗಣಪತಿ ಹೆಗಡೆ ಇತರರು ಅವರ ಮನೆಯಂಗಳದಲ್ಲಿ ತಿರುಗಾಡಿ ಕೃಷಿ ಮಹಿಳೆಯ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.