ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಹಲವು ಕಡೆ ಗುಡ್ಡ ಕುಸಿದಿದೆ. ಹೊನ್ನಾವರ, ಯಲ್ಲಾಪುರ, ಕಾರವಾರದಲ್ಲಿ ರಸ್ತೆ ಸಂಚಾರ ವ್ಯಾಪಕ ಪ್ರಮಾಣದಲ್ಲಿ ಹದಗೆಟ್ಟಿದೆ.
ಹೊನ್ನಾವರದಲ್ಲಿ ಕರ್ನಲ್ ಹಿಲ್ ಗುಡ್ಡ ಮೇಲಿದ್ದ ಬಂಡೆ ಹೆದ್ದಾರಿ ಮೇಲೆ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಹೊನ್ನಾವರ ವರ್ನಕೇರಿ ಬಳಿಯೂ ಗುಡ್ಡ ಕುಸಿದಿದೆ. ಕಾರವಾರದ ಚೆಂಡಿಯಾದ ಇಡೂರು ಭಾಗದಲ್ಲಿ ಕೃಷಿಭೂಮಿ ಜಲಾವೃತಗೊಂಡಿದೆ. ಯಲ್ಲಾಪುರದ ಅರಬೈಲ್ ಘಟ್ಟದಲ್ಲಿ ಸಹ ಹೆದ್ದಾರಿ ಮೇಲೆ ಮಣ್ಣು ಬಿದ್ದಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು. ಯಲ್ಲಾಪುರ ತಾಲೂಕಿನ ದೆಹಳ್ಳಿ – ಬಳಗಾರ ಭಾಗದ ದಬ್ಬೆಸಾಲ ಬಳಿ ರಸ್ತೆಯ ಮೇಲೆ ಗುಡ್ಡ ಕುಸಿದಿದ್ದು, ಗ್ರಾಮಸ್ಥರು ಶ್ರಮದಾನ ನಡೆಸಿ ರಸ್ತೆ ಸರಿಪಡಿಸಿಕೊಂಡರು.