ಭಟ್ಕಳ: ಶಿರಾಲಿಯ ಶ್ರೀಕೃಷ್ಣಪ್ರಾಸ ಹೋಟೆಲ್ ಎದುರು ಮದ್ಯ ಸೇವಿಸುತ್ತಿದ್ದ ಜೀವನ ನಾಯ್ಕ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ಆತನ ನಶೆ ಇಳಿಸಿದ್ದಾರೆ.
ಕೂಲಿ ಕೆಲಸ ಮಾಡುವ ಗುಡಿಹತ್ಲದ ಜೀವನ ನಾಯ್ಕ (36) ಜುಲೈ 6ರಂದು ಸಂಜೆ ಕೆಲಸ ಮುಗಿಸಿದ ನಂತರ ಮನೆಗೆ ಮರಳಿರಲಿಲ್ಲ. ಬದಲಾಗಿ ರಾತ್ರಿ 11 ಗಂಟೆಯವರೆಗೂ ಶಿರಾಲಿಯ ಶ್ರೀಕೃಷ್ಣಪ್ರಾಸ ಹೋಟೆಲ್ ಎದುರು ಮದ್ಯ ಸೇವಿಸುತ್ತಿದ್ದ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರಿದ್ದರು. ಪಿಸೈ ರಣ್ಣಗೌಡ ಪಾಟೀಲ್ ಈತನ ಬಳಿ ತೆರಳಿದಾಗ ಸಾರ್ವಜನಿಕ ಸ್ಥಳದಲ್ಲಿ ಸರಾಯಿ ಸೇವಿಸುತ್ತಿರುವುದು ಖಚಿತಗೊಂಡಿದ್ದು, ಪೊಲೀಸರು ಆತನ ಬಳಿಯಿದ್ದ ಎರಡು ವಿಸ್ಕಿ ಪಾಕೇಟ್\’ಗಳನ್ನು ಕಸಿದುಕೊಂಡರು. ನಂತರ ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು.