ಭಟ್ಕಳದ ರಂಗಿನ ಕಟ್ಟೆ ಹಾಗೂ ಸಂಶುದ್ದಿನ್ ವೃತ್ತದ ಬಳಿ ಹೆದ್ದಾರಿ ಮೇಲೆ ನೀರು ನಿಂತಿದ್ದು, ವಾಹನ ಸವಾರರು ಪರದಾಟ ನಡೆಸಿದರು. ರಸ್ತೆ ಯಾವುದು? ಹೊಂಡ ಯಾವುದು? ಎಂದು ಅರಿವಿಗೆ ಬಾರದೇ ಜನ ವಾಹನ ಸಂಚಾರ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಅವರ ಬೆಂಗಾವಲು ಕಾರು ಸಹ ನೀರಿನಲ್ಲಿ ಸಿಲುಕಿದ್ದು, ಅವು 4 ನಿಮಿಷದ ನಂತರ ಹರಸಾಹಸದಿಂದ ಮುಂದೆ ಚಲಿಸಿದವು.
ಕಳೆದ ಅನೇಕ ವರ್ಷಗಳಿಂದ ಇಲ್ಲಿ ಈ ಸಮಸ್ಯೆ ಇದೆ. ಪ್ರತಿ ಮಳೆಗಾಲದಲ್ಲಿಯೂ ಹೆದ್ದಾರಿ ಮೇಲೆ ನೀರು ತುಂಬುತ್ತದೆ. ಇದರಿಂದ ಬೇರೆ ಬೇರೆ ಭಾಗಗಳಿಂದ ಬರುವ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಸ್ಥಳೀಯರಂತೂ ಎಷ್ಟು ಬೇಡಿಕೆ ಇಟ್ಟರೂ ನೀರು ನುಗ್ಗುವ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. `ಈ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಯೇ ಬರಬೇಕೆ?\’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.