ದಾಂಡೇಲಿಯ ಗಾಂಧಿನಗರದ ನಿವಾಸಿಗಳಾದ ಮಾರುತಿ ಶಿನ್ನೂರು ಆತನ ತಂದೆ ಸಂಗಪ್ಪ ಶಿನ್ನೂರು, ತಾಯಿ ಮಹದೇವಿ ಶಿನ್ನೂರು ಎಂಬಾತರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ರಾತ್ರಿ ವೇಳೆ ಮಾರುತಿ ಶಿನ್ನೂರು ಎಂಬಾತ ಮನೆಯಲ್ಲಿ ಒಂಟಿಯಾಗಿ ಇದ್ದಾಗ ಚಂದ್ರನ್ ಮಲ್ನಾಡ್, ಸಂತೋಷ್ ಚಂದ್ರನ್ ಮಲ್ನಾಡ್ ಎಂಬಾತರು ಮನೆಯೊಳಗೆ ಪ್ರವೇಶಿಸಿ, ಹಲ್ಲೆ ನಡೆಸಿದ್ದಾರೆ. ನಂತರ ಮಾರುತಿಯನ್ನು ಮನೆಯಿಂದ ಹೊರಗೆ ಎಳೆದೊಯ್ದು ಅಲ್ಲಿಯೇ ಇದ್ದ ಮೈದಾನಕ್ಕೆ ಕರೆ ತಂದು ಹಲ್ಲೆ ನಡೆಸಿದ್ದಾರೆ. ಇದನ್ನು ನೋಡಿ ಮಗನನ್ನು ರಕ್ಷಿಸಲು ಬಂದ ಮಾರುತಿ ಅಪ್ಪ – ಅಮ್ಮನಿಗೂ ಈ ತಂಡದವರು ಹೊಡೆದಿದ್ದಾರೆ. ಗಂಭೀರ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.