ಭಟ್ಕಳದ ರಂಗಿನಕಟ್ಟೆ ಬಳಿ ನೀರು ನಿಲ್ಲುವ ಸಮಸ್ಯೆ ಬಗೆಹರಿಸಲಾಗಿದೆ ಎಂದು ಭಟ್ಕಳ ಪುರಸಭೆ ಶನಿವಾರ ಪತ್ರಿಕಾ ಪ್ರಕಟಣೆ ಹೊರಡಿಸಿತ್ತು. ಆದರೆ, ಭಾನುವಾರ ಬೆಳಗ್ಗೆಯೇ ಆ ಸಮಸ್ಯೆ ಮುಂದುವರೆದಿದೆ.

ನೀರು ಸರಾಗವಾಗಿ ಹೋಗಲು ದಾರಿ ಮಾಡಿಕೊಡುವುದು ಪುರಸಭೆಯ ಕರ್ತವ್ಯ. ಈ ಭಾಗದಲ್ಲಿ ಸರಿಯಾದ ಗಟಾರ ಇಲ್ಲದ ಕಾರಣ ಎಲ್ಲೆಂದರಲ್ಲಿ ನೀರು ನಿಲ್ಲುತ್ತಿದೆ. ಈ ಬಗ್ಗೆ ಸ್ಥಳೀಯರು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇದರಿಂದ ತಬ್ಬಿಬ್ಬಾದ ಅಧಿಕಾರಿಗಳು ಕಾಟಾಚಾರದ ಕಾಮಗಾರಿ ನಡೆಸಿದ್ದರು. ಇದರ ಜೊತೆ `ತಾವು ದೊಡ್ಡದಾಗಿ ಸಾಧನೆ ಮಾಡಿದ್ದೇವೆ\’ ಎಂದು ಫೋಟೋ ಜೊತೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದರು. ಆದರೆ, ಅದೆಲ್ಲವೂ ಸುಳ್ಳು ಎಂಬುದು ಭಾನುವಾರ ಬಹಿರಂಗಗೊoಡಿದೆ.
ಕಳೆದ ಐದು ವರ್ಷಗಳಿಂದ ರಂಗಿನಕಟ್ಟೆ ಹೆದ್ದಾರಿಯಲ್ಲಿ ಜನ ತೊಂದರೆ ಅನುಭವಿಸುತ್ತಿದ್ದಾರೆ. ಭಾನುವಾರ 4 ಅಡಿ ಎತ್ತರದವರೆಗೆ ನೀರು ನಿಂತಿದ್ದು, ವಾಹನಗಳಿಗೆ 1ಕಿಮೀ ಕ್ರಮಿಸಲು 20 ನಿಮಿಷ ಬೇಕಾಯಿತು. ಆಂಬುಲೆನ್ಸ್ ಸಹ ಮುಂದೆ ಚಲಿಸಲಾಗದೇ ತೊಂದರೆ ಅನುಭವಿಸಿದ್ದು, ಸೇವೆ ಸರಿ ಇಲ್ಲದಿದ್ದರೂ ಹೆದ್ದಾರಿಯ ಟೋಲ್ ವಸೂಲಿ ಮಾತ್ರ ಇನ್ನೂ ನಿಂತಿಲ್ಲ.