ಭಟ್ಕಳ: ಹಾಡುವಳ್ಳಿಯ ಮಂಜುನಾಥ ಕುಪ್ಪಯ್ಯ ನಾಯ್ಕ (60) ಎಂಬಾತರು ಕಾಲು ಜಾರಿ ಬಿದ್ದು ಸಾವನಪ್ಪಿದ್ದಾರೆ.
ಜುಲೈ 7ರಂದು ಬೆಳಗ್ಗೆ 6.45ರ ವೇಳೆಗೆ ಅವರು ತಮ್ಮ ತೋಟಕ್ಕೆ ಹೋಗಿದ್ದರು. ಅಲ್ಲಿ ಕೃಷಿ ಚಟುವಟಿಕೆ ಮುಗಿಸಿ ಮನೆಗೆ ಮರಳುತ್ತಿರುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದು, ಪ್ರಜ್ಞೆ ಕಳೆದುಕೊಂಡಿದ್ದರು. ಇದನ್ನು ನೋಡಿದ ಅವರ ಮಗ ಕೇಶವ ನಾಯ್ಕ 7 ಗಂಟೆ ಸುಮಾರಿಗೆ ಅವರನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು ಮಂಜುನಾಥ ನಾಯ್ಕ ಸಾವನಪ್ಪಿರುವುದಾಗಿ ಘೋಷಿಸಿದ್ದಾರೆ.