
ಅಂಕೋಲಾ: ಕನಸಿನ ಗದ್ದೆಯ ಅಕ್ಷಯ್ ಆನಂದು ವರ್ಣೇಕರ್ (29) ಎಂಬಾತನ ಪತ್ನಿ ಆತನಿಂದ ದೂರವಾಗಿದ್ದು, ಇದೇ ಕೊರಗಿನಲ್ಲಿ ಆತ ನೇಣಿಗೆ ಶರಣಾಗಿದ್ದಾನೆ.
ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದ ಈತನಿಂದ ಪತ್ನಿ ದೂರವಾಗಿದ್ದಳು. ಅಂದಿನಿoದ ಆತ ಮದ್ಯ ಸೇವನೆಯ ಚಟಕ್ಕೆ ಅಂಟಿಕೊoಡಿದ್ದ. ಈಚೆಗೆ ಕೆಲಸಕ್ಕೆ ಸಹ ಸರಿಯಾಗಿ ಹೋಗುತ್ತಿರಲಿಲ್ಲ. ಹೀಗಿರುವಾಗ ಜುಲೈ 6ರಂದು ರಾತ್ರಿ 10.30ರ ಅವಧಿಯಲ್ಲಿ ಆತ ಮನೆಯ ಜಂತಿಗೆ ನೇಣಿ ಬಿಗಿದುಕೊಂಡಿದ್ದಾನೆ. ಇದನ್ನು ನೋಡಿದ ಆತನ ತಾಯಿ ಅನಿತಾ ಕಡವಾಲ್ ತಕ್ಷಣ 108 ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆತಂದಿದ್ದು, 12.30ರ ವೇಳೆಗೆ ಆತ ಸಾವನಪ್ಪಿರುವುದಾಗಿ ಪೊಲೀಸರು ಘೋಷಿಸಿದ್ದಾರೆ.