ಕುಮಟಾ: ಗೋಕರ್ಣ ಬಳಿಯ ಗಂಗಾವಳಿ ಮೂಲಕ ಅಂಕೋಲಾ ಕೇಣಿ ತಲುಪುವ ಪುರಾತನ ರಸ್ತೆ ಸಂಪೂರ್ಣ ಹಾಳಾಗಿದೆ.
ಗೋಕರ್ಣ ಬಳಿಯ ಚೌಡಗೇರಿಯಿಂದ ಗಂಗಾವಳಿ ಮಾರ್ಗದಲ್ಲಿರುವ ತಲಗೇರಿ ಕಿರಿಯ ಪ್ರಾಥಮಿಕ ಶಾಲೆ ಬಳಿ ಅತ್ಯಧಿಕ ಹೊಂಡಗಳಿವೆ. ಈ ಹೊಂಡಗಳಲ್ಲಿ ನೀರು ತುಂಬಿರುವುದರಿ0ದ ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆಯಾಗುತ್ತಿದೆ. ಶಾಲೆಗೆ ಮಕ್ಕಳನ್ನು ಬಿಡಲು ಬರುವ ಪಾಲಕರು ಇಲ್ಲಿ ಬೈಕಿನಿಂದ ಬಿದ್ದು ಗಾಯಗೊಂಡಿದ್ದಾರೆ. ಶಾಲಾ ಮಕ್ಕಳು ನಡೆದು ಹೋಗುವಾ ಇತರೆ ವಾಹನಗಳು ಹೊಂಡಕ್ಕೆ ಇಳಿದು ಮಕ್ಕಳ ಮೈ ರಾಡಿಯಾಗುತ್ತಿದೆ. ಅಧಿಕ ಬಾರದ ಲಾರಿ ಓಡಾಟ ಈ ರಸ್ತೆ ಹಾಳಾಗಲು ಕಾರಣ ಎಂಬುದು ಸ್ಥಳೀಯರ ದೂರು.