ಹೊನ್ನಾವರ: ಕಾಸರಕೋಡು ಕಡಲತೀರದ ಅಳವೆ ಪ್ರದೇಶದಲ್ಲಿ 17 ವರ್ಷದೊಳಗಿನ ಯುವತಿಯ ಶವ ದೊರೆತಿದೆ. ಆಕೆ ಯಾರು ಎಂದು ಗೊತ್ತಾಗದ ಕಾರಣ ಪೊಲೀಸರು ಸಂಬoಧಿಕರ ಹುಡುಕಾಟದಲ್ಲಿದ್ದಾರೆ.
ಜುಲೈ 8ರ ಬೆಳಗ್ಗಿನ ಅವಧಿಯಲ್ಲಿ ಈಕೆಯ ಶವ ಕಡಲತೀರದಲ್ಲಿ ಕಾಣಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ. ಆದರೂ, ಆಕೆಯ ಗುರುತು ಪತ್ತೆ ಮಾಡಿದವರಿಲ್ಲ. ಹೀಗಾಗಿ ಆಕೆಯ ಪರಿಚಯಸ್ಥರು ಯಾರಾದರೂ ಇದಲ್ಲಿ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ವಾರಸುದಾರರು 948005270ಗೆ ಕರೆ ಮಾಡುವಂತೆ ಪೊಲೀಸರು ಕೋರಿದ್ದಾರೆ.