ಕರಾವಳಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕುಮಟಾದ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಇಲ್ಲಿನ ಅನೇಕ ಮನೆಗಳ ಒಳಗೆ ನೀರು ನುಗ್ಗಿದ್ದು, ರಸ್ತೆ ಅಂಚಿನಲ್ಲಿ ಮೊಣಕಾಲಿನವರೆಗೆ ನೀರು ಹರಿಯುತ್ತಿದೆ. ದೀವಗಿ ಮಳಕೋಣ ಭಾಗದಲ್ಲಿ ರಸ್ತೆ ಕುಸಿದಿದೆ. ಊರಕೇರಿ, ಕೆಳಗಿನಕೇರಿ, ಹರಿಜನಕೇರಿ, ಕೋನಳ್ಳಿ, ಊರಕೇರಿ, ಹೆಬಳೆಹಿತ್ಲ, ದಾದುಮನೆ ಕೇರಿ ಹಲವು ಭಾಗಗಳಲ್ಲಿ ನೀರು ನುಗ್ಗಿದೆ. ದೀವಗಿ ಭಾಗದಲ್ಲಿ ಅಘನಾಶಿನಿ ನದಿಯ ದಡದಲ್ಲಿರುವ ಅನೇಕ ಮನೆಗಳು ಜಲಾವೃತಗೊಂಡಿದೆ.
ಜಲಾವೃತಗೊoಡ ಪ್ರದೇಶಗಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಸೋಮವಾರ ಭೇಟಿ ನೀಡಿದರು. ಶಾಸಕ ದಿನಕರ ಶೆಟ್ಟಿ ಅವರ ಜೊತೆಯಿದ್ದು, ಸಮಸ್ಯೆ ಆಲಿಸಿದರು. ಇಲ್ಲಿನ ಗುಂದ, ಶಶಿಹಿತ್ತಲು ಭಾಗದ ಜನ ತಮ್ಮ ಅಹವಾಲುಗಳನ್ನು ಹೇಳಿಕೊಂಡರು.