ಕಾರವಾರ: ಸದಾಶಿವಗಡ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಶಿಕ್ಷಕ ಗಣೇಶ ಬಿಷ್ಠಣ್ಣನವರ್ ಆಯ್ಕೆಯಾಗಿದ್ದಾರೆ.
ಅವರ ಜೊತೆ ಕಾರ್ಯದರ್ಶಿಯಾಗಿ ತಿಪ್ಪೇಸ್ವಾಮಿ, ಖಜಾಂಚಿಗಳಾಗಿ ಸುನೀಲ ಐಗಳ ಉಪಾಧ್ಯಕ್ಷರಾಗಿ ಉಷಾ ರಾಣೆ ಹಾಗೂ ಪ್ರಣವ ರಾಣೆ ಆಯ್ಕೆಯಾಗಿದ್ದಾರೆ. ಉಳಿದಂತೆ ವಿವಿಧ ಹುದ್ದೆಗಳಿಗೆ ತಬಸಮ್ ಮುಖಾದಮ್, ಸೋನಿಯಾ ಅಣ್ವೇಕರ, ಜಯಶೀಲಾ ಬಿಷ್ಠಣ್ಣನವರ, ಡಾ ಸಂದೀಪ್ ಅಣ್ವೇಕರ, ನಾಗೇಂದ್ರ ವೇರ್ಣೇಕರ ಆಯ್ಕೆಯಾಗಿದ್ದಾರೆ.
ಕ್ಲಬ್ಬಿನ ನಿರ್ದೇಶಕರಾಗಿ ರೋಶನ್ ರೇವಣಕರ, ಡಾ ನಯೀಮ್ ಮುಖಾದಮ್, ರಾಮಚಂದ್ರ ಅಂದ್ಲಮನೆ, ಗಜಾನನ ನಾಯ್ಕ, ರೀಯಾ ರೇವಣಕರ, ಟೈಲ್ ಟ್ವಿಸ್ಟರಾಗಿ ರಘುವೀರ ನಾಯ್ಕ, ಟಿಮರಾಗಿ ಲ.ಶುಭದಾ ಫಳ್ ಆಯ್ಕೆ ಆಗಿದ್ದಾರೆ.