`ಸಂಬoಧಕ್ಕೆ ಸಂಪತ್ತಿನ ತ್ಯಾಗ ಆಗಬೇಕೇ ವಿನ: ಸಂಪತ್ತಿಗೆ ಸಂಬoಧಗಳ ತ್ಯಾಗ ಆಗಬಾರದು\’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಗೋಕರ್ಣ ಅಶೋಕೆಯಲ್ಲಿ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದ ಬೆಳ್ಳಿ ಹಬ್ಬದಲ್ಲಿ ಮಾತನಾಡಿದ ಅವರು `ಈಗ ಭಾವ ಹಾಗೂ ಭಾಷೆ ಸಂಕರ ಆಗುತ್ತಿದೆ. ಭಾಷೆ ಜೊತೆ ಸಂಸ್ಕಾರ ಕೂಡ ಇರಬೇಕು. ಭಾಷೆಯೊಳಗೆ ಅನ್ಯಭಾಷೆ ಸೇರಿ ಹೋದರೆ ಆ ಸಂಸ್ಕಾರ ಕೂಡ ಮಿಶ್ರ ಆಗುತ್ತದೆ. ಸಮಾಜದಲ್ಲಿ ಮೌಲ್ಯ ಹಂಚುವಲ್ಲಿ ತಾಳಮದ್ದಲೆಯ ಮೂಲಕ ನಾಟ್ಯಶ್ರೀ ಒಳ್ಳೆ ಕೆಲಸ ಮಾಡುತ್ತಿದೆ\’ ಎಂದರು. `ಯಕ್ಷಗಾನ, ತಾಳಮದ್ದಲೆಗೆ ವಿಶೇಷ ಶಕ್ತಿಯಿದೆ. ಸಮಾಜದಲ್ಲಿ ಮೌಲ್ಯ ಹಂಚುವಲ್ಲಿ ತಾಳಮದ್ದಲೆಯ ಪಾತ್ರ ದೊಡ್ಡದು\’ ಎಂದರು.