ಶಿರಸಿ: ಅಕ್ರಮ, ಅವ್ಯವಹಾರಗಳ ಜೊತೆ `ಕೊಳೆತ ಉಪ್ಪಿನಕಾಯಿ\’ ಮಾರಾಟ ವಿಷಯದಿಂದಲೂ ವಿವಾದ ಅಂಟಿಸಿಕೊoಡಿದ್ದ ಶಿರಸಿಯ ಟಿ ಎಸ್ ಎಸ್ ಸಂಸ್ಥೆಯಲ್ಲಿ ಇದೀಗ `ಆಣೆ – ಪ್ರಮಾಣ\’ದ ವೇದಿಕೆ ಸೃಷ್ಟಿಯಾಗಿದೆ.
`ನಾನು ಭ್ರಷ್ಟನಲ್ಲ\’ ಎಂದು ಸಾರಿರುವ ಟಿಎಸ್ಎಸ್ ಮಾಜಿ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಬಗ್ಗೆ `ದೇವರ ಮೇಲೆ ಆಣೆ ಮಾಡಲು ಸಿದ್ಧ\’ ಎಂದು ಹೇಳಿದ್ದಾರೆ. `ಸದಸ್ಯರು ಬಯಸಿದರೆ ಯಾವ ದೇವರ ಎದುರು ಬೇಕಾದರೂ ನಾನು ಬರುತ್ತೇನೆ. ವಿರೋಧಿಗಳು ಬಂದು ಪ್ರಮಾಣ ಮಾಡಲಿ\’ ಎಂದು ಅವರು ಸವಾಲು ಹಾಕಿದ್ದಾರೆ.
`ವೈಯಕ್ತಿಕ ದ್ವೇಷದಿಂದ ಅನಗತ್ಯ ಪ್ರಕರಣ ದಾಖಲಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನಮಗೆ ವಿಶ್ವಾಸವಿದ್ದು, ಎಲ್ಲವನ್ನೂ ಎದುರಿಸಿ, ಪರಿಶುದ್ಧರಾಗಿ ನಿಲ್ಲುತ್ತೇವೆ\’ ಎಂದು ಟಿ ಎಸ್ ಎಸ್ ಮಾಜಿ ಜನರಲ್ ಮ್ಯಾನೇಜರ್ ರವೀಶ ಹೆಗಡೆ ಹೇಳಿದ್ದಾರೆ. `ನನ್ನಿಂದ ಯಾರಿಗೂ ತೊಂದರೆ ಆಗಿಲ್ಲ. ಸಂಸ್ಥೆಯ ಆದಾಯವನ್ನು 22 ಕೋಟಿ ರೂಪಾಯಿಗೆ ಏರಿಸಿದ್ದು, ಸ್ಥಿರಾಸ್ತಿ 350 ಕೋಟಿ ರೂ ಆಗಿದೆ. ಇದನ್ನು ಯಾರು ಕದಿಯಲು ಸಾಧ್ಯವಿಲ್ಲ\’ ಎಂದು ರವೀಶ ಹೆಗಡೆ ಹೇಳಿದ್ದಾರೆ.