ಉತ್ತರ ಕನ್ನಡ ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆoಟ್ ಡಾ ಸಂಜು ನಾಯಕ ಅವರು ಪ್ರಕೃತಿ ವಿಕೋಪ ನಿರ್ವಹಣೆ ಕುರಿತು ತರಬೇತಿ ಪಡೆದಿದ್ದು, ಆಸಕ್ತರಿಗೆ ಅವರು ತರಬೇತಿ ನೀಡಲು ಸಿದ್ಧವಾಗಿದ್ದಾರೆ.
ಆಡಳಿತ ತರಬೇತಿ ಸಂಸ್ಥೆಯಲ್ಲಿ 5 ದಿನಗಳ ಕಾಲ ತರಬೇತಿಯನ್ನು ಅವರು ಮುಗಿಸಿದ್ದಾರೆ. `ಜಿಲ್ಲೆಯ ಯಾವುದೇ ಸಂಘ ಸಂಸ್ಥೆಯವರು ಬಯಸಿದರೆ, ಅವರ ಸಿಬ್ಬಂದಿಗೆ ತರಬೇತಿ ನೀಡುವೆ\’ ಎಂದು ಅವರು ಹೇಳಿದ್ದಾರೆ.