ಕುಮಟಾ: ಹಳೆಯ ಮೀನು ಮಾರುಕಟ್ಟೆ ರಸ್ತೆಯಲ್ಲಿ ಪುರಸಭೆ ಗ್ರಂಥಾಲಯವಿದ್ದು, ಸುತ್ತಲಿನ ತೆರವು ಮಾಡದೇ ಇದ್ದಲ್ಲಿ ಪೂರ್ತಿಯಾಗಿ ಪೊದೆಗಳಿಂದ ಮುಚ್ಚುವ ಸಾಧ್ಯತೆಯಿದೆ. ಈ ಕೇಂದ್ರದ ಸುತ್ತ ಅಶುಚಿತ್ವ ಕಾಡುತ್ತಿದ್ದು, ಪುಸ್ತಕ ಓದಲು ಆಗಮಿಸುವ ಮಕ್ಕಳು ಹೆದರುತ್ತಿದ್ದಾರೆ.
ಮೊದಲು ಇಲ್ಲಿ ನಿತ್ಯ ಸಾವಿರಾರು ಜನ ಪುಸ್ತಕ ಓದಲು ಬರುತ್ತಿದ್ದರು. ಆದರೆ, ಪೊದೆ ಹೆಚ್ಚಾದ ನಂತರ ಹಾವು-ಚೇಳುಗಳು ಒಳ ನುಗ್ಗುತ್ತಿದೆ. ಹೀಗಾಗಿ ಆಗಮಿಸುವವರ ಸಂಖ್ಯೆ ಮೊದಲಿಗಿಂತ ಕಡಿಮೆಯಾಗಿದೆ.
ಗ್ರಂಥಾಲಯದ ಸುತ್ತ ಪೊದೆ ಬೆಳೆದಿರುವುದರಿಂದ ಪಕ್ಕದ ಅಂಗನವಾಡಿ ಮಕ್ಕಳಲ್ಲಿಯೂ ಆತಂಕ ಹೆಚ್ಚಾಗಿದೆ. ಈ ಗ್ರಂಥಾಲಯ ಕಟ್ಟಡ ಸಹ ಶಿಥಿಲಗೊಂಡಿದೆ. ಮಳೆ ನೀರು ಪುಸ್ತಕದ ಮೇಲೆ ಸೋರುತ್ತದೆ. ಜೊತೆಗೆ ವಿದ್ಯುತ್ ಬೆಳಕಿನ ವ್ಯವಸ್ಥೆ ಸಹ ಸರಿಯಾಗಿಲ್ಲ ಎಂಬುದು ಸಾಹಿತ್ಯಾಸಕ್ತರ ಅಳಲು.