
ಸಿದ್ದಾಪುರ: ಕೆಪಿಟಿಸಿಎಲ್ ನಿವೃತ್ತ ಅಧಿಕಾರಿ ವೆಂಕಟೇಶ್ ಭಟ್ಟ (೬೦) ಅವರಿಗೆ ಬೈಕ್ ಗುದ್ದಿದ್ದು, ಅವರು ಗಾಯಗೊಂಡಿದ್ದಾರೆ.
ಹಾಳದಕಟ್ಟಾದಲ್ಲಿ ವಾಸವಾಗಿರುವ ವೆಂಕಟೇಶ್ ಭಟ್ಟರು ನಡೆದುಕೊಂಡು ಹೋಗುತ್ತಿದ್ದಾಗ ಸೊರಬ ಕಡೆ ಸಂಚರಿಸುತ್ತಿದ್ದ ಇಬ್ರಾಹಿಂ ರಿಯಾಜ್ ಖಾನ್ ಎಂಬಾತ ಅಪಘಾತಪಡಿಸಿದ್ದಾನೆ. ಆತ ಹಿಂದಿನಿoದ ಬಂದು ಬೈಕ್ ಗುದ್ದಿದ್ದಾನೆ. ಇದರಿಂದ ವೆಂಕಟೇಶ ಭಟ್ಟರು ನೆಲಕ್ಕೆ ಬಿದ್ದು, ಕೈ, ಕಣ್ಣು ಹಾಗೂ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ.