
ಮುoಡಗೋಡ: ಪಾಳಾ ಭಾಗದ ಜನರ ಅನುಕೂಲಕ್ಕಾಗಿ ಕೆಡಿಸಿಸಿ ಬ್ಯಾಂಕ್ ಆ ಭಾಗದಲ್ಲಿ ತನ್ನ ಶಾಖೆಯನ್ನು ಶುರು ಮಾಡಿದೆ.
ಶಾಸಕರೂ ಆಗಿರುವ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ನೂತನ ಶಾಖೆ ಉದ್ಘಾಟಿಸಿದ್ದು, ಸಹಕಾರಿ ಕ್ಷೇತ್ರದ ಸಾಧನೆಗಳ ಬಗ್ಗೆ ಮಾತನಾಡಿದರು. ಕೆ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ್ ನಾಯಕ, ನಿರ್ದೇಶಕ ಪ್ರಮೋದ ದವಳೆ, ಎಲ್.ಟಿ.ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನೇಶ್ವರ ಗುಡಿಯಾಳ, ಪ್ರಧಾನ ಕಾರ್ಯದರ್ಶಿ ಗೋಪಾಲ ಪಾಟೀಲ್ ಇತರರು ಇದ್ದರು.