
ದಾಂಡೇಲಿ: ನೀಲಗಿರಿ ನಾಟಾ ಸಾಗಿಸುತ್ತಿದ್ದ ಲಾರಿ ಅಪಘಾತವಾಗಿದ್ದು, ಲಾರಿ ಚಾಲಕ ಸಾವು ಕೊಕ್ಕರೆ ಎಂಬಾತ ಲಾರಿಯಿಂದ ಜಿಗಿದು ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ.
ಕೊಲ್ಲಾಪುರದಿoದ ಬಂದ 12 ಚಕ್ರದ ಲಾರಿ ಕೇರವಾಡದ ಬಳಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಲಾರಿ ಜಖಂ ಆಗಿದ್ದು, ಲಾರಿಯಲ್ಲಿದ್ದ ಚಾಲಕ ಅಲ್ಲಿಂದ ಹಾರಿ ಜೀವ ಉಳಿಸಿಕೊಂಡಿದ್ದಾನೆ. ಈ ವೇಳೆ ಆತನ ಬುಜಕ್ಕೆ ಪೆಟ್ಟಾಗಿದೆ.