ಕಾರವಾರ: `ಸಾಮಾಜಿಕ ಸೇವೆಯಲ್ಲಿ ಲಯನ್ಸ್ ಸಂಸ್ಥೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದೆ\’ ಎಂದು ದಂತವೈದ್ಯ ಡಾ ಸಂದೀಪ್ ಅಣ್ವೇಕರ ಹೇಳಿದರು.
ಸದಾಶಿವಗಡದಲ್ಲಿ ಲಯನ್ಸ್ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಅವರು `ಶ್ರದ್ಧೆ ಮತ್ತು ಆಸಕ್ತಿಯಿಂದ ಕೆಲಸ ಮಾಡುವ ಲಯನ್ಸ್ ವಿಶ್ವದ 208 ದೇಶಗಳಲ್ಲಿದೆ. ಇದು ನಮ್ಮೆಲ್ಲರ ಹೆಮ್ಮೆ\’ ಎಂದರು.
ಲಯನ್ಸ್ ಅಧ್ಯಕ್ಷ ಗಣೇಶ ಬಿಷ್ಟಣ್ಣನವರ ಮಾತನಾಡಿ `ಲಯನ್ಸ್ ಸಂಸ್ಥೆ ಉನ್ನತ ಮಟ್ಟದಲ್ಲಿ ಬೆಳೆಯಲು ಸದಸ್ಯರ ಸಹಕಾರ ಕಾರಣ\’ ಎಂದರು. ಪ್ರಮುಖರಾದ ರೋಶನ್ ರೇವಣಕರ, ನಾಗೇಂದ್ರ ವೇರ್ಣೇಕರ, ವಸಂತ ಬಾಂದೇಕರ, ತಬಸಮ್ ಮುಖಾದಮ್, ರಘವೀರ ನಾಯ್ಕ ಇತರರು ಇದ್ದರು.