ದಾಂಡೇಲಿ: 20 ವರ್ಷದ ಚಂದ್ರು ತಳವಾರ ಎಂಬಾತ 720 ಗ್ರಾಂ ಗಾಂಜಾ ಮಾರಾಟಕ್ಕೆ ತೆರಳಿ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾನೆ.
ದಾಂಡೇಲಿ ಬಾಂಬುಗೇಟ್ ಬಳಿಯ ಚಂದ್ರು ತಳವಾರ್ ಜುಲೈ 21ರ ಸಂಜೆ ಅಂಬೇವಾಡಿಯ ನರ್ಸಿಂಗ್ ವಿದ್ಯಾರ್ಥಿ ವಸತಿ ನಿಲಯದ ಬಳಿ ನಿಂತಿದ್ದ. ಆತನ ಕೈಯಲ್ಲಿ ಸೀಲ್ ಮಾಡಿದ ಬಟ್ಟೆಯ ಬ್ಯಾಗ್ ಇದ್ದು, ಮಳೆಯಲ್ಲಿ ಅದು ನೆನೆದಿತ್ತು. ಪೊಲೀಸರನ್ನು ನೋಡಿದ ಆತ ನಡುಗುತ್ತಿದ್ದ. ಪಿಸೈ ಐ ಆರ್ ಗಡ್ಡೇಕರ್ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಬಟ್ಟೆಯ ಬ್ಯಾಗಿನಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ. ಗಾಂಜಾ ಮಾರಾಟದ ಉದ್ದೇಶಕ್ಕಾಗಿ ಆತ ಅಲ್ಲಿ ನಿಂತಿರುವುದಾಗಿ ಒಪ್ಪಿಕೊಂಡಿದ್ದು, ತಕ್ಷಣ ಆತನನ್ನು ವಶಕ್ಕೆ ಪಡೆದ ಪೊಲೀಸರು ಕಿಸೆಯಲ್ಲಿದ್ದ 200ರೂ ಹಣದ ಜೊತೆ 4200ರೂ ಮೌಲ್ಯದ ಹಸಿಗಾಂಜಾವನ್ನು ಜಪ್ತು ಮಾಡಿಕೊಂಡಿದ್ದಾರೆ.