ಯಲ್ಲಾಪುರ: ರಭಸ ಮಳೆಗೆ ಮಾವಿನಕಟ್ಟಾದ ಚಿಪಗೇರಿಯಲ್ಲಿ ಮನೆ ಕುಸಿದಿದೆ.
ಜುಲೈ 21ರ ರಾತ್ರಿ ಮನೆಯ ಗೋಡೆ ಕುಸಿದಿದ್ದು, ಹಂಚುಗಳೆಲ್ಲವೂ ನೆಲಕ್ಕೆ ಅಪ್ಪಳಿಸಿದೆ. ಮಜ್ಜಿಗೆಹಳ್ಳದ 71 ವರ್ಷದ ವೃದ್ಧೆ ಗಂಗುಬಾಯಿ ದೋಯಪಾಂಡೆ ಈ ಮನೆಯಲ್ಲಿ ವಾಸವಾಗಿದ್ದರು. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಪಂಚಾಯತ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೂರ್ತಿ ಮನೆ ಬಿದ್ದಿದ್ದರೂ ಅಧಿಕಾರಿಗಳು ಭಾಗಶಃ ಹಾನಿ ಎಂದು ವರದಿ ಸಲ್ಲಿಸುತ್ತಿರುವುದರಿಂದ ಸರ್ಕಾರಿ ನೆರವು ಸಿಗುತ್ತಿಲ್ಲ ಎಂಬುದು ಮನೆ ಮಾಲಕರ ಅಳಲು. ಆರ್ಥಿಕವಾಗಿ ಹಿಂದೂಳಿದ ಮನೆ ಮಾಲಕರಿಗೆ ಸರ್ಕಾರ ಅಗತ್ಯವಿರುವಷ್ಟು ನೆರವು ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.